Thursday 14 July 2016

The Saga of the Satpura Range's Drought.


Nandurabar is an important district of Khandesh region of the Northwestern part of Maharashtra. One side the region is covered by river the Narmada and the Tapi on the other side, this also falls under the preview of the Sardar Sarovar Project. This mega project includes around 30 largest and 130 medium dams. At the initial stage, the purpose of project was to provide drinking water and electricity facilities to the drought hit regions of Rajasthan, Maharashtra, Madhya Pradesh and Gujarat. However, over a period time the region witnessed different episodes. The project caused to deforestation of more than thousand hectors along with displacement of native tribal people.
The project was highly opposed by many including Ms.Medha Patkar, Arundhati Roy in early 90’s. Later stage, this resentment was diverted into two branches; one was as an environment movement and other was protection of rights of Adivasis. In this context, by revisiting of all these past there is a need of understand the plight of drought in the Satpura Range.
Ten years old girl Sunita carrying 40 litres of water in Satpura Range
Photo courtesy: Rehman Punnodi
Geographically, the Satpura Range stretches in Gujarat, Maharashtra and Madhya Pradesh. Besides, it also divides river the Narmada and the Tapi. We could able to trace out this drought region covered by rich natural resource with the help of Drought Duty programme jointly organized by Ekta Parishad, Jal Biradari, National Alliance of People Movement and Swaraj Abhiyan during June 21-29. Including me from University of Hyderabad, Advait Shukla from Mumbai Institute of Forensic Science, Druva Singhal from St. Stephen College, New Delhi, Aparana Sing from Asia College of Journalism and Rahman Punnodi from Calicut took participation in this programme. We were assigned the study of three villages of Taloda taluk of Nandurabar district of Maharashtra. It was surprise to know that these three villages were absent in the district map. However, the main purpose of our study was to assess the quality of water and water resources. Besides these objectives of the team was also to shed light on other problems of the Reva Nagar, Chidimal, Guriyamal and Khurdamal along with water problems.
As prefixed, we stayed in Reva Nagar. This village has been set up for the refuges of Sardar Sarovar Project. The village has around 7000 population, most of them depending on agriculture. Their main water resources is being fulfilled by tube wells. Though it is rehabilitation village of refugees of Pavara tribe, they are not a benefited from a drop of water of the Sardar Sarovar Project. Similarly, electricity connectivity yet to be reached here, road facility is not up to the expected. As said by Veersingh, the resident of this village, the government has not provided any subsidy to these refuges to drill bore well. This was the story of Reva Nagar, while the picture of MalKhurda which is 10 KM away from here entirely different.
MalKhurda is a village of 30 Pahadis which is situated above 4000 feet of the Satpura Range. We stayed here in the house of Bokobhav. The true story he revealed during our stay in his house was a live example of how today’s governments suppress the rights of Adivasis. According to the Forest Act -2006, a programme has been launched to survey pahadis through GPS technology. Since, most the pahadis constructed under tree satellite cannot cover these pahadis. Thus, the rights over land has been rejected to these tribes. On the other hand, health, education and electricity facilities of these people remained as a mirage. The story of Chidmal and Guriymal which are close to this village is also same.  Even after 6 decades, the electricity is here a pipe dream. The condition of pregnant women of the region very pathetic, at the time of delivery they have to cross 10KM steep distance of the Range. There are many examples who lost lives during this critical time. Many of the women folk of the region migrate to neighbour state Gujarat for construction works except Kharif season. Most of them are pregnant women, they had worked in the fields and building construction works even before a week of the delivery. The water sources of the village have totally been dried. As described by Karmsingh, a resident of Malkhurda more than 200 cattle in a year an average of 20 per month died due to scarcity of fodder or by drinking polluted water. Importantly, the life style of Bhils tribe of the region largely depending on cattle. The absence of machines whether in agriculture or any other activities was main reason behind it. This the conditions of cattle, whereas the picture of Anganavadis of Guriyamal unimaginable.
There are 40 students who officially registered in the school.  However, during our visit we find only 6 students who attend regularly. Mid day meal programme was nowhere found here. Chidimal village is having 370 population, but only 4 people have reached up to the 10th standard. Most of the children are suffering from hunger. Thus, Reva Nagar, Chidimal, Guriyamal and Khurdamal’s heart touching stories look like perpetual and common to them. The issue of water is different because minimum 8 people spend their whole day only with 50 liters of water. In another shocking the story, stone or mud being used for defecation.
The question is that whether the government knows these unheard stories or not. The rule of the WHO recommendation to use minimum 50 to 100 liters of water per person is literally not applicable to these villages. We faced all these episodes as the reflections of new life during our visit to pahadis.
The 10 years old girl named Sunita who has not registered in school, from dawn 4 am to sunny afternoon with the help of two metal pot fetching 40 liters water from a spring by crossing 3-4 KM valleys of the Satpura for the last two years. They have to wait minimum one hour to fill one pot in this water scary spring. This is not merely Sunita’s story rather problem of all children of this age as said by an elder of the village. This is a reflection of abject of drought. Though, Chidimal, Guriyamal and Khurdamal seem to be Gandhi’s Self sustained Republic Models, Right to Life under the Constitution has been totally ignored here. Whether it is in the form of education or food or health. When we turn the pages of history with regard to the empowerment of tribes, Isolation Approach of Varrior Elven, Assimilation Approach of G. S. Ghurye, and Integration Approach of Nehru in the post-Independence era open the gates for discussion.

In this context, as far as this issue is concerned, discussing Integration Approach of post-Independence makes sense. Bringing the tribes into the main stream of the society as well as safeguarding their age old culture, language and practices are the main objectives of this approach. This approach plays a decisive role in the lives of tribes as it has a positive perspective of development. However, when we see these villages this conclusion seems to be wrong. Because, 90% of the governments programmes are unknown to them. When we enquired about Mahatma Gandhi National Rural Employment Guarantee Scheme, they had no information about such schemes. We have to introspect that how much share of these sons of soil are sharing in a multi colour India such as Digital India and Make in India who are living in an extraordinary pitiful condition. In essence, here, drought is not merely nature’s curse but plague to government will power and its programmes and policies as well.

Manjunath Naragund
MA in Political Science
University of Hyderabad
The original version of my Kannada article published in the Kannada daily Vartha Bharati

English Translation:
Shiva Raj
JRF PhD Research scholar
Department of politics and International relations
Pondicherry university

Tuesday 5 July 2016


ಸಾತ್ಪುರ ಶ್ರೇಣಿಯ ಬರದ ಕಥನಗಳು

             

ನಂದುರಬಾರ್ ಮಹಾರಾಷ್ಟ್ರದ ವಾಯುವ್ಯ ಭಾಗದ ಖಾಂದೇಶ್ ಪ್ರದೇಶದಲ್ಲಿರುವ  ಪ್ರಮುಖ ಜಿಲ್ಲೆ. ಒಂದು ಕಡೆ ನರ್ಮದಾ ಇನ್ನೊಂದೆಡೆ ತಪತಿ ನದಿ ಸೆರಗಿನಲ್ಲಿರುವ  ಈ  ಪ್ರದೇಶ ಮುಖ್ಯವಾಗಿ  ಸರ್ದಾರ್ ಸರೋವರ ಯೋಜನೆಯ ವ್ಯಾಪ್ತಿಗೂ ಒಳಪಟ್ಟಿದೆ. ಇಂತಹ ಬೃಹತ್ ಯೋಜನೆ ಸುಮಾರು ೩೦ ದೊಡ್ಡ ಹಾಗೂ ೧೩೦  ಮಧ್ಯಮ ಗಾತ್ರದ  ಣೆಕಟ್ಟುಗಳನ್ನು ಹೊಂದಿದೆ. ಪ್ರಾರಂಭದಲ್ಲಿ ಈ ಯೋಜನೆಯ ಉದ್ದೇಶ ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳ ಬರಪ್ರದೇಶಗಳಿಗೆ  ಕುಡಿಯುವ ನೀರು  ಹಾಗು ವಿದ್ಯುತ್ ಸೌಕರ್ಯ ನೀಡುವುದಾಗಿತ್ತು. ಆದರೆ, ಕಾಲಾಂತರದ ಬೆಳವಣಿಗೆಯಲ್ಲಾದ ವ್ಯತ್ಯಾಸವೇ ಬೇರೆ. ಅದರಲ್ಲೂ  ಮುಖ್ಯವಾಗಿ ಇಂತಹ ಯೋಜನೆ ಸಾವಿರಾರು ಹೆಕ್ಟೇರ್ ಅರಣ್ಯವನ್ನು ನಾಶಪಡಿಸಿದ್ದಲ್ಲದೆ, ಇಲ್ಲಿನ ಆದಿವಾಸಿ ಜನರನ್ನು ಕೂಡ  ನಿರಾಶ್ರಿತರನ್ನಾಗಿ  ಮಾಡಿತು.

ಈ ಯೋಜನೆಯನ್ನು ೯೦ ರ ದಶಕದ ಪ್ರಾರಂಭದಲ್ಲಿ ವಿರೋಧಿಸಿದವರಲ್ಲಿ  ಮೇಧಾ ಪಾಟ್ಕರ್ , ಅರುಂಧತಿ ರಾಯ್ ಪ್ರಮುಖರು. ಒಂದು ಕಡೆ ಈ ಚಳವಳಿ ಪರಿಸರ ಚಳವಳಿಯಾಗಿಯೂ ಮತ್ತು ಆದಿವಾಸಿಗಳ ಹಕ್ಕುಗಳ ರಕ್ಷಣಾ ನಡೆಯಾಗಿಯೂ ಮಾರ್ಪಟ್ಟಿತು. ಆದ್ದರಿಂದ, ಈ ಎಲ್ಲ ಹಿನ್ನೆಲೆಗಳನ್ನು ಪುನರಾವಲೋಕನಕ್ಕೆ ಒಳಪಡಿಸುವದರ ಮೂಲಕ ನಾವು ಸಾತ್ಪುರ ಶ್ರೇಣಿಯ ಬರದ ಬವಣೆಗಳನ್ನು ಅರಿತು ಕೊಳ್ಳಬೇಕಾಗಿದೆ.
ಭೌಗೋಳಿಕವಾಗಿ ಸಾತ್ಪುರ ಶ್ರೇಣಿ  ಗುಜರಾತ್ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ ಚಾಚಿದೆ,  ಅಲ್ಲದೆ ಮುಖ್ಯವಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ದೇಶದ ಎರಡು ಪ್ರಮುಖ ನದಿಗಳಾದ ನರ್ಮದಾ ಮತ್ತು ತಪತಿಯನ್ನು ವಿಭಾಗಿಸಿದೆ. ಇಂತಹ  ವಿಪುಲ ನೈಸರ್ಗಿಕ ಸಂಪನ್ಮೂಲಗಳ ನಡುವೆ ಇರುವ ಬರದ ಕಥನಗಳ ಜಾಡು ಹಿಡಿಯಲು ನಮಗೆ ಸಾಧ್ಯವಾಗಿದ್ದು, ಏಕತಾ ಪರಿಷತ್, ಜಲ ಬಿರಾದರಿ ಮತ್ತು National Alliance of People's Movements (NAPM)  ಹಾಗೂ ಸ್ವರಾಜ್ ಅಭಿಯಾನ ಸಂಘಟನೆಗಳ  ಸಹಯೋಗದ ಮೂಲಕ  ಇತ್ತೀಚೆಗೆ  ಜೂನ್ ೨೧ ರಿಂದ ೨೯ ರವರೆಗೆ ಆಯೋಜಿಸಿದ್ದ DROUGHT DUTY  ಮೂಲಕ. ಇಂತಹ ಪ್ರಯೋಗಕ್ಕೆ ಮುಂಬೈನ   ಇನ್ಸ್ಟಿಟ್ಯೂಟ್  ಆಫ್  ಫಾರೆನ್ಸಿಕ್ ಸೈನ್ಸ್ ನಿಂದ ಅದ್ವೈತ್ ಶುಕ್ಲಾ, ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಿಂದ ಧ್ರುವ ಸಿಂಘಾಲ. ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನಿಂದ ಅಪರ್ಣಾ ಸಿಂಗ್ ಚೌಧರಿ,  ಕ್ಯಾಲಿಕಟ್ ವಿವಿಯಿಂದ ರೆಹಮಾನ್ ಪುನ್ನೋಡಿ  ಮತ್ತು ಹೈದರಾಬಾದ್ ಕೇಂದ್ರೀಯ ವಿವಿಯಿಂದ ನಾನು  ಹಾಜರಿದ್ದೆವು. ನಮಗೆ ಮಹಾರಾಷ್ಟ್ರದ ನಂದುರಬಾರ್ ಜಿಲ್ಲೆಯ ತಲೋದಾ ತಾಲೂಕಿನಲ್ಲಿರುವ ೩ ಗ್ರಾಮಗಳ ಅಧ್ಯಯನ ಕಾರ್ಯವನ್ನು ಒದಗಿಸಲಾಗಿತ್ತು. ನಮಗೆ ವಹಿಸಿದ್ದ ಮೂರೂ ಗ್ರಾಮಗಳು ಜಿಲ್ಲೆಯ ಭೂಪಟದಲ್ಲಿ ಇರಲೇ ಇಲ್ಲ. ಇದು ನಮಗೆ ಆಶ್ಚರ್ಯ ತಂದಿತ್ತು. ನಮ್ಮ ಐದು ಜನರ ತಂಡ ಮುಖ್ಯ ಉದ್ದೇಶವು ಇಲ್ಲಿನ ನೀರಿನ ಗುಣಮಟ್ಟ ಮತ್ತು ಜಲಸಂಪನ್ಮೂಲಗಳನ್ನು ಅಳೆಯುವುದು. ಇಂತಹ ಕಾರ್ಯ ಯೋಜನೆಗೆ ಹೊರಟ ನಮ್ಮ ತಂಡಕ್ಕೆ ರೇವಾ ನಗರ, ಚಿಡಿಮಾಲ್, ಗುರಿಯಮಾಲ್ ಹಾಗೂ ಮಾಲ್ ಖುರ್ದಾ ಗ್ರಾಮಗಳಲ್ಲಿನ  ನೀರಿನ ಸಮಸ್ಯೆಯ  ಜೊತೆಗೆ ಇತರ ಸಮಸ್ಯೆಗಳ ಮೇಲೂ  ಬೆಳಕು ಚೆಲ್ಲುವುದಾಗಿತ್ತು.

ನಾವು  ಪೂರ್ವನಿಗದಿಯಂತೆ ಮೊದಲು ರೇವಾ ನಗರದಲ್ಲಿ ಉಳಿದುಕೊಂಡೆವು. ಇದು ಸರ್ದಾರ್ ಸರೋವರ ಯೋಜನೆಯ ನಿರಾಶ್ರಿತರಿಗೆ ಕಟ್ಟಿರುವ ಒಂದು ಗ್ರಾಮವಾಗಿದ್ದು, ಇದು  ಸುಮಾರು ೭,೦೦೦ ಜನಸಂಖ್ಯೆ ಹೊಂದಿದೆ. ಇಲ್ಲಿನ ಬಹುತೇಕರ ಉದ್ಯೋಗ ಕೃಷಿ. ಇವರಿಗೆ ನೀರಿನ ಸಂಪನ್ಮೂಲ  ದೊರೆಯುವುದು ಕೊಳವೆಬಾವಿಗಳಿಂದ. ಇದು ನಿರಾಶ್ರಿತ “ಪಾವರಾ” ಬುಡಕಟ್ಟು ಸಮುದಾಯಕ್ಕೆ  ಕಟ್ಟಿದ ಪುನರ್ವಸನ ಗ್ರಾಮವಾಗಿದ್ದರೂ ಸಹಿತ ಸರ್ದಾರ್ ಸರೋವರ ಯೋಜನೆಯಿಂದ ಹನಿ ನೀರು ದೊರೆತಿಲ್ಲ. ಇನ್ನು ವಿದ್ಯುತ್ ಸೌಲಭ್ಯವಂತು ದೂರದ ಮಾತು. ರಸ್ತೆ ಸೌಕರ್ಯವಂತೂ ಅಷ್ಟಕಷ್ಟೇ. ಇಲ್ಲಿನ ನಿವಾಸಿ ವೀರಸಿಂಗ್ ಹೇಳುವಂತೆ ಬೋರ್ ವೆಲ್ಗಳನ್ನೂ ತೆರೆಯಲು ಇಲ್ಲಿವರೆಗೂ ಯಾವುದೇ ರೀತಿಯ ಸಹಾಯಧನವನ್ನು ಇಲ್ಲಿನ ನಿರಾಶ್ರಿತರಿಗೆ ಸರ್ಕಾರ ನೀಡಿಲ್ಲ. ಇದು ಸಮತಟ್ಟಾದ ಭೂಪ್ರದೇಶದಲ್ಲಿರುವ ರೇವಾನಗರದ ಕಥೆಯಾದರೆ, ಇಲ್ಲಿಂದ ಸುಮಾರು ೧೦ ಕಿ.ಮೀ.  ದೂರದಲ್ಲಿರುವ ಮಾಲ್ ಖುರ್ಧಾದಲ್ಲಿನ ಚಿತ್ರಣವೇ ಬೇರೆ!

ಸಾತ್ಪುರ ಶ್ರೇಣಿಯ ಸುಮಾರು ೪,೦೦೦ ಅಡಿ ಎತ್ತರದಲ್ಲಿರುವ ೩೦ ಪಹಾಡಿಗಳ ಊರು ಮಾಲ್ ಖುರ್ದಾ. ಇಲ್ಲಿ ನಾವು ಬೋಕೊಭಾವ್ ಎನ್ನುವರ ಮನೆಯಲ್ಲಿ  ಉಳಿದುಕೊಂಡಿದ್ದೆವು.  ಈ ಸಂದರ್ಭದಲ್ಲಿ ಅವರು ಬಿಡಿಸಿದ  ವಾಸ್ತವ ಚಿತ್ರಣವು ಇಂದಿನ ಸರ್ಕಾರಗಳು ಹೇಗೆ ಆದಿವಾಸಿಗಳ ಮೂಲಭೂತ ಹಕ್ಕುಗಳನ್ನು ಧಮನಗೊಳಿಸುತ್ತಿವೆ ಎನ್ನುವುದಕ್ಕೆ ಒಂದು ನೇರ ಉದಾಹರಣೆಯಂತಿತ್ತು. ಅರಣ್ಯ ಕಾಯ್ದೆ-೨೦೦೬ರ ಅನ್ವಯ GPS ತಂತ್ರಜ್ಞಾನದ ಮೂಲಕ ಪಹಾಡಿಗಳನ್ನು ಸಮೀಕ್ಷೆ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.  ಆದರೆ, ಇಲ್ಲಿನ ಬಹುತೇಕ ಪಹಾಡಿಗಳು ಮರದ ಕೆಳಗೆ ಕಟ್ಟಲ್ಪಟ್ಟಿದ್ದರಿಂದ ಸ್ಯಾಟಲೈಟ್ ಗೆ ಗೋಚರವಾಗಲಿಲ್ಲ.  ಹೀಗಾಗಿಯೇ ಇಲ್ಲಿನ ಬಹುತೇಕ ಬುಡಕಟ್ಟು ಸಮುದಾಯದವರಿಗೆ ಜಮೀನು ಹಕ್ಕನ್ನು ತಿರಸ್ಕರಿಸಲಾಯಿತು. ಇನ್ನು ಆರೋಗ್ಯ,  ಶಿಕ್ಷಣ ಹಾಗೂ ವಿದ್ಯುತ್ ಸೌಲಭ್ಯವಂತೂ ಇಲ್ಲಿನವರಿಗೆ ಮರೀಚಿಕೆಯಾಗಿಯೇ ಉಳಿದಿದೆ. ಮಾಲ್ ಖುರ್ಧಾ ಗ್ರಾಮಕ್ಕೆ ಸನಿಹದಲ್ಲಿರುವ  ಚಿಡಿಮಾಲ್  ಮತ್ತು ಗುರಿಯಾಮಾಲ್ ಗ್ರಾಮಗಳದ್ದು ಇದೆ ಕಥೆ. ೬ ದಶಕ ಕಳೆದರೂ ವಿದ್ಯುತ್ ಇವರಿಗೆ ಇನ್ನು ಕನಸಿನ ದೀಪವಾಗಿದೆ. ಇಲ್ಲಿನ ಗರ್ಭಿಣಿಯರ ಸ್ಥಿತಿಯಂತೂ ಹೇಳತೀರದು. ಹೆರಿಗೆ ಸಮಯದಲ್ಲಿ ಸುಮಾರು ೧೦ ಕಿ.ಮೀ  ದೂರದಷ್ಟು  ಶ್ರೇಣಿಯ ಇಲಿಜಾರನ್ನು ದಾಟಿಯೇ ಹೋಗಬೇಕು. ಇಂತಹ ಸಂದರ್ಭದಲ್ಲಿ  ಕೆಲವರು ದಾರಿ ಮಧ್ಯದಲ್ಲಿಯೇ ಜೀವ ಕಳೆದುಕೊಂಡಿದ್ದುಂಟು. ಇಲ್ಲಿನ ಬಹುತೇಕ ಮಹಿಳೆಯರು ಖಾರಿಫ್ ಸಮಯವನ್ನು ಹೊರತು ಪಡಿಸಿದ ಅವಧಿಯಲ್ಲಿ ಪಕ್ಕದ ಗುಜರಾತಿಗೆ ಕಟ್ಟಡ ಕೆಲಸಕ್ಕಾಗಿ ಗೂಳೆ ಹೋಗುತ್ತಾರೆ. ಇವರಲ್ಲಿ ಗರ್ಭಿಣಿಯರು ಸೇರಿದ್ದಾರೆ ಮತ್ತು ಕೆಲವರು ಹೆರಿಗೆಯಾಗುವ ವಾರದ ಮೊದಲು ಕೂಡ ಕೃಷಿ ಹಾಗು ಇನ್ನಿತರ ದಿನಗೂಲಿ ಕೆಲಸಗಳಿಗೆ ಹೋಗಿದ್ದುಂಟು.  ಇಲ್ಲಿನ ಗ್ರಾಮಗಳ  ನೀರಿನ ಮೂಲಗಳಂತೂ ಸಂಪೂರ್ಣ ಬತ್ತಿಹೋಗಿವೆ. ಮಾಲ್ ಖುರ್ಧಾ ನಿವಾಸಿ  ಕರ್ಮಸಿಂಗ್ ಹೇಳುವಂತೆ  ಇಲ್ಲಿ ಪ್ರತಿ ತಿಂಗಳು ಕನಿಷ್ಟ  ೨೦ ರಂತೆ  ಪ್ರತಿ ವರ್ಷ ೨೦೦ ಕ್ಕೂ ಹೆಚ್ಚು  ಜಾನುವಾರು ಮೇವು ಇಲ್ಲದೆ, ಇಲ್ಲವೆ ಕಲುಷಿತ ನೀರು  ಕುಡಿದು ಸಾವನ್ನಪ್ಪಿವೆ. ಮುಖ್ಯವಾಗಿ ಇಲ್ಲಿನ ಬಹುತೇಕ  ಭಿಲ್ ಬುಡಕಟ್ಟು ಸಮುದಾಯದ  ಜೀವನ ವಿಧಾನ  ಜಾನುವಾರಿನ ಮೇಲೆ ಅವಲಂಬಿತವಾಗಿದೆ. ಕಾರಣವಿಷ್ಟೇ ಒಂದೆಡೆ ಅದು ಕೃಷಿಯಾಗಿರಬಹುದು ಅಥವಾ ಇನ್ನಿತರ ಕಸುಬಾಗಿರಬಹುದು., ಇಲ್ಲಿ ಯಂತ್ರಗಳ ಬಳಕೆ ಇರದಿರುವುದರಿಂದ ಬಹುಪಾಲು ಕಾರ್ಯ  ಜಾನುವಾರುಗಳ ಮೇಲೆ ಅವಲಂಬಿತ. ಇದು ಜಾನುವಾರುಗಳ ಕಥೆಯಾದರೆ ಇನ್ನೊಂದಡೆಗೆ ಗುರಿಯಾಮಾಲ್ ಅಂಗನವಾಡಿ ಚಿತ್ರಣವಂತೂ ಇನ್ನು ಹೇಳತೀರದು.

ಇಲ್ಲಿ ಅಧಿಕೃತವಾಗಿ ದಾಖಲಾಗಿರುವ ವಿದ್ಯಾರ್ಥಿಗಳ  ಸಂಖ್ಯೆ ೪೦.  ಆದರೆ, ಭೇಟಿಯ ವೇಳೆ ನಾವು ಮನಗಂಡಿದ್ದು ದಿನಪ್ರತಿ ಬರುವ ವಿದ್ಯಾರ್ಥಿಗಳ ಸಂಖ್ಯೆ  ಕೇವಲ ೬ ..! ಎಂಬುದು. ಇದಿಷ್ಟೇ ಮಾತ್ರವಲ್ಲ, ಇಲ್ಲಿ ದಿನಂಪ್ರತಿ ಮಧ್ಯಾಹ್ನದ ಬಿಸಿ ಊಟ ಕೊಡುವ ಪರಿಪಾಠವಂತೂ ಇಲ್ಲವೇ ಇಲ್ಲ!  ಕೆಲವು ವಿದ್ಯಾರ್ಥಿಗಳು ತಾವು ಊಟ ಮಾಡಿ ಮಿಕ್ಕ ಅನ್ನವನ್ನು ಕೈವಸ್ತ್ರದಲ್ಲಿ ಕಟ್ಟಿ ಕೊಳ್ಳುವ ದೃಶ್ಯ  ನಮಗೆ ವಿಚಿತ್ರವೆನಿಸಿತು. ಇದರ ಬಗ್ಗೆ ವಿಚಾರಿಸಿದಾಗ ಇಲ್ಲಿನ ಬಹುತೇಕ ಬುಡಕಟ್ಟು ಸಮುದಾಯಗಳು ಪ್ರತಿ ದಿನ ೨ ಹೊತ್ತು ಮಾತ್ರ ಊಟವನ್ನು ಮಾಡುತ್ತಾರಂತೆ. ಇನ್ನು ಯಾರಾದರೂ ಅತಿಥಿಗಳು ಮನೆಗೆ  ಬಂದರಂತೂ ಆ ದಿನ ಒಂದೇ ಹೊತ್ತು ಊಟ ಅವರಿಗೆ. ಇಂತಹ  ಅನುಭವ  ನಮಗಾದದ್ದು ನಾವು ಚಿಡಿಮಾಲ್ ಗೆ ಭೇಟಿ ನೀಡಿದಾಗ. ಈ ಗ್ರಾಮ ಸುಮಾರು ೩೭೦ ಜನಸಂಖ್ಯೆ ಹೊಂದಿದೆ.  ಗ್ರಾಮದಲ್ಲಿ ಕೇವಲ  ೪ ಜನ ಮಾತ್ರ ೧೦ನೇ ತರಗತಿವರೆಗೆ  ವಿದ್ಯಾಭ್ಯಾಸ ಮಾಡಿದ್ದಾರೆ.  ಇಲ್ಲಿನ ಬಹುತೇಕ ಮಕ್ಕಳು ಆಹಾರದ ಕೊರತೆಯಿಂದಾಗಿ Low responsiveness to stimuli ಯಿಂದ ಬಳಲುತ್ತಿದ್ದಾರೆ. ಇಂತಹ ಹಲವು  ಕರುಣಾಜನಕ ಕಥೆಗಳು ಈ ಮಾಲ್ ಖುರ್ದಾ , ಚಿಡಿಮಾಲ್ ಮತ್ತು ಗುರಿಯಾಮಾಲ್ ಗ್ರಾಮಗಳಲ್ಲಿ ಸಾಮಾನ್ಯ ಎನ್ನುವಷ್ಟರಮಟ್ಟಿಗಿವೆ. ಇನ್ನು ನೀರಿನ ವಿಷಯಕ್ಕೆ ಬರುವುದಾದರೆ ಇಲ್ಲಿ  ಕನಿಷ್ಟ  ೮ ಜನರು ೫೦ ಲೀಟರ್ ನೀರಿನಲ್ಲಿ ತಮ್ಮ ಇಡೀ ದಿನವನ್ನು ಕಳೆಯುತ್ತಾರೆ. ನಮಗೆ ಇನ್ನೊಂದು ಆಘಾತಕಾರಿ ಅಂಶ  ಕಣ್ಣಿಗೆ ಬಿದ್ದದ್ದು ಇಲ್ಲಿ ಪ್ರತಿಯೊಬ್ಬರೂ ಮಲವಿಸರ್ಜನೆಗೆ  ಕಲ್ಲೋ ಅಥವಾ ಮಣ್ಣನ್ನೂ ಬಳಸುವ ಅಮಾನವೀಯ ಪರಿಪಾಠವಿದೆ.

ಇಲ್ಲಿಯವರೆಗೂ ನಾವು ಕೇಳದೆ ಇದ್ದ ಇಂತಹ ಸಂಗತಿಗಳು ಸರ್ಕಾರಕ್ಕೆ ತಿಳಿದಿವೆಯೇ ..? ಎನ್ನುವುದು ಪ್ರಶ್ನೆ. ಒಂದು ಕಡೆ ವಿಶ್ವ ಆರೋಗ್ಯ ಸಂಸ್ಥೆ (WHO) ನಿರ್ದೇಶನದಂತೆ ಪ್ರತಿ ವ್ಯಕ್ತಿಯು ಕನಿಷ್ಟ ೫೦ ರಿಂದ ೧೦೦ ಲೀಟರ್ ನೀರನ್ನು ಬಳಸಬೇಕು ಎನ್ನುವ ಈ ನಿಯಮ ಖಂಡಿತ ಇಲ್ಲಿರುವ ಹಳ್ಳಿಗಳಿಗೆ  ಅನ್ವಯವಲ್ಲ ಎನ್ನುವಂತಿವೆ. ಇಂತಹ ಸಂಗತಿಗಳು ನಮಗೆ ದಾರಿಗುಂಟ ಈ ಹಳ್ಳಿ ಗಳಲ್ಲಿರುವ ಪಹಾಡಿಗಳ ಮಧ್ಯ  ಸಾಗುತ್ತಲಿರುವಾಗ ಪ್ರತಿ ಪಹಾಡಿಯ ಒಂದೊಂದು  ದೃಶ್ಯವು ನಮಗೆ ಹೊಸ ಜೀವನ ದರ್ಶನದಂತೆ ಗೋಚರಿಸುತ್ತಿತ್ತು.
ಇದುವರೆಗೂ ಶಾಲೆಗೆ ದಾಖಲಾಗದ  ಸುನೀತಾ ಎಂಬ ೧೦  ವರ್ಷದ ಬಾಲಕಿ  ಕಳೆದೆರಡು ವರ್ಷಗಳಿಂದ ಪ್ರತಿದಿನ ಬೆಳಗಿನ ೪ ಗಂಟೆಯಿಂದ ಸೂರ್ಯ ಸುಡು ನೆತ್ತಿಗೆ ಬರುವವರೆಗೆ ಸುಮಾರು ೪೦ ಲೀಟರ್ ಭಾರದ ಎರಡು ಲೋಹದ ಕೊಡಗಳನ್ನು ಹೊತ್ತು ಸಾತ್ಪುರದ ಶ್ರೇಣಿಯ ಕಣಿವೆಗಳ ಇಳಿಜಾರುಗಳನ್ನು ದಾಟಿ ಕನಿಷ್ಟ ೩ ರಿಂದ ೪ ಕಿಲೋಮೀಟರು ದೂರದಲ್ಲಿರುವ ಸಣ್ಣ ಒರತೆಯಿಂದ ನೀರನ್ನು ಮನೆಗೆ ಒಯ್ಯುತ್ತಾಳೆ. ಇಲ್ಲಿ ರುವ ನೀರಿನ ಸೆಲೆಯಲ್ಲಿ ಒಂದು ಮಡಿಕೆಯಷ್ಟು ನೀರು ತುಂಬಬೇಕೆಂದರೆ ಕನಿಷ್ಟ ಪಕ್ಷ ೧ ಗಂಟೆಯವರೆಗೆ ಕಾಯಬೇಕು. ಇದು ಸುನೀತಾನ ಕಾಯಕ ಮಾತ್ರವಲ್ಲ ಇಲ್ಲಿರುವ ಎಲ್ಲ ಎಳೆಯ ಕಂದಮ್ಮಗಳು ಸಹಿತ ಮಾಡುವ ಸಾಮಾನ್ಯ ಕಾಯಕ ಎನ್ನುವ ಇಲ್ಲಿನ  ಹಿರಿಯನೊಬ್ಬ ಹೇಳಿದ ಮಾತು ಈ ಪ್ರದೇಶದಲ್ಲಿನ ಬರದ ತೀವ್ರತೆಗೆ ಕನ್ನಡಿ  ಹಿಡಿದಂತಿದೆ.

ಒಂದು ಕಡೆ ನಮಗೆ ಮಾಲ್ ಖುರ್ದಾ, ಚಿಡಿಯಮಾಲ್ ಹಾಗೂ ಗುರಿಯಾಮಾಲ್ ಗಳು ಗಾಂಧೀಜಿಯ Self sustained Republic model ನ ಸುಖಿ ರಾಜ್ಯಗಳಾಗಿ ಕಂಡರೂ ಸಹಿತ Article 21 ರಂತೆ ಸಂವಿಧಾನಾತ್ಮಕವಾಗಿ ದೊರಕಬೇಕಾದ Right to Life ಇಲ್ಲಿ ದಿನವಿಡಿ ಉಲ್ಲಂಘಿಸಲ್ಪಡುತ್ತಿದೆ. ಅದು ಶಿಕ್ಷಣದ ರೂಪದಲ್ಲಿರಬಹುದು, ಆಹಾರದ ರೂಪದಲ್ಲಿರಬಹುದು ಅಥವಾ ಆರೋಗ್ಯದ ರೂಪದಲ್ಲಿರಬಹುದು. ಇನ್ನು ನಾವು ಇತಿಹಾಸದ ಪುಟಗಳನ್ನು ಕೆಣಕಿದಾಗ ಬುಡಕಟ್ಟು ಸಮುದಾಯಗಳ ಏಳಿಗೆಯ ನಿಟ್ಟಿನಲ್ಲಿ  ಉಂಟಾದ ಪ್ರಮುಖ ಚರ್ಚೆಗಳಲ್ಲಿ  ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್ ನ Isolation Approach (ಪ್ರತ್ಯೇಕತೆಯ ವಿಧಾನ) G.S ಘುರ್ಯ ರವರ Assimilation Approach (ಹೊಂದಾಣಿಕೆಯ ವಿಧಾನ) ಹಾಗೂ ಸ್ವಾತಂತ್ರೋತ್ತರ ಭಾರತದಲ್ಲಿ ಚಾಲನೆಯಲ್ಲಿರುವ  ಜವಾಹರಲಾಲ್ ನೆಹರುರವರ Integration Approach (ಏಕೀಕರಣ ವಿಧಾನ)ಗಳು ನಮಗೆ ಬುಡಕಟ್ಟು  ಸಮುದಾಯಗಳ ಅಭಿವೃದ್ಧಿ ವಿಚಾರದಲ್ಲಿ ಬಹುಮುಖ ಚರ್ಚೆಗೆ  ಆಸ್ಪದ ನೀಡುತ್ತವೆ. ಇಂತಹ ಚರ್ಚೆಗಳಲ್ಲಿ ಸ್ವಾತಂತ್ರೋತ್ತರ ಬೆಳವಣಿಗೆಯಲ್ಲಿನ Integration approach ಬಗ್ಗೆ  ಚರ್ಚಿಸುವುದು  ಈ ವಿಷಯದ ಮಟ್ಟಿಗೆ ಹತ್ತಿರವಾಗುತ್ತದೆ. ಅಂದರೆ ಬುಡಕಟ್ಟು ಸಮುದಾಯಗಳನ್ನು ಸಾಮಾನ್ಯರಂತೆ  ಮುಖ್ಯ ಪರದೆಗೆ ತರುವುದರ ಜೊತೆಗೆ ಅವರ ಸ್ಥಳೀಯ ಸಂಪ್ರದಾಯ, ಭಾಷೆ, ಪದ್ದತಿ, ರೂಢಿಗಳನ್ನು ಸಂರಕ್ಷಿಸುವುದು ಇದರ ಉದ್ದೇಶ ವಾಗಿದೆ. ಇಂತಹ ಅಭಿವೃದ್ಧಿಪರ  ಸಕಾರಾತ್ಮಕ ದೃಷ್ಟಿಕೋನ  ಹೊಂದಿದ್ದ ಈ ವಿಧಾನ  ಬುಡಕಟ್ಟು ಸಮುದಾಯಗಳ ಏಳಿಗೆಯಲ್ಲಿ  ನಿರ್ಣಾಯಕ ಪಾತ್ರವಹಿಸುತ್ತದೆ. ಆದರೆ, ಇಲ್ಲಿನ ಎಲ್ಲ ಹಳ್ಳಿಗಳ ವಿಚಾರದಲ್ಲಿ ಇದೊಂದು ಹಸಿ ಸುಳ್ಳು ಎನಿಸುತ್ತದೆ. ಕಾರಣ, ನಾವು ಇಲ್ಲಿ ಬಹುಮುಖ್ಯವಾಗಿ ಗಮನಿಸಿದ ಸಂಗತಿಯೆಂದರೆ ಸರ್ಕಾರದ ೯೦ ರಷ್ಟು ಯೋಜನೆಗಳು  ಇವರಿಗೆ ಗೊತ್ತೇ ಇಲ್ಲ. ನಾವು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ವಿಚಾರಿಸಿದಾಗ ಬಹುತೇಕ ಜನರಿಗೆ ಇಂತಹ ರೋಜಗಾರ ಯೋಜನೆಗಳ  ಬಗ್ಗೆ ಮಾಹಿತಿಯೇ ಇಲ್ಲ. ಇನ್ನು ಇಂತಹ ಹೀನಾಯ ಸ್ಥಿತಿಗಳ ಮಧ್ಯದಲ್ಲಿ  ಬದುಕುತ್ತಿರುವ ಈ ಮಣ್ಣಿನ ಮಕ್ಕಳಿಗೆ  Digital India, Make in India  ಮತ್ತು shining India ಎನ್ನುವ ಬಹುವರ್ಣ ರಂಜಿತ ಭಾರತದಲ್ಲಿ ಇವರಿಗೆ ಪಾಲೆಷ್ಟು  ಎನ್ನುವುದನ್ನು ನಾವು ಚಿಂತಿಸಬೇಕಾಗಿದೆ. ಒಟ್ಟಾರೆ ಹೇಳುವುದಾದರೆ  ಇಲ್ಲಿ ಬರ ಎನ್ನುವುದು  ಕೇವಲ ನಿಸರ್ಗದಿಂದ ಆದ ಪಿಡುಗಲ್ಲ. ಇದು ಸರ್ಕಾರದ ಇಚ್ಛಾಶಕ್ತಿಗೆ ಮತ್ತು ಅದರ ಯೋಜನೆ ಮತ್ತ್ತು ಕಾರ್ಯಕ್ರಮಗಳಿಗೆ ಅಂಟಿದ ಪಿಡುಗಾಗಿದೆ. ಇಂತಹ ಸಂದರ್ಭದಲ್ಲಿ ಜನವರಿ ೨೬, ೧೯೫೦ ರಂದು  ಸಾಂವಿಧಾನಿಕ ಶಾಸನ ಸಭೆಯ ಚರ್ಚೆಗಳಲ್ಲಿ(Constituent Assembly Debates)  ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಮಾತುಗಳು ನಮಗೆ  ಇಂದಿಗೂ  ಪ್ರಸ್ತುತ ಎನಿಸುತ್ತವೆ.

“ಜನವರಿ ೨೬, ೧೯೫೦ ರ ಇಂದು  ನಾವು ಜೀವನದ ಹಲವು ವೈರುಧ್ಯಗಳಲ್ಲಿ ಕಾಲಿಡುತ್ತಿದ್ದೇವೆ. ರಾಜಕೀಯದಲ್ಲಿ ನಮಗೆ ಸಮಾನ ಅವಕಾಶವಿರುತ್ತದೆ. ಆದರೆ, ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಲ್ಲಿ ಇದು ಇನ್ನೂ ಅಸಮಾನತೆಯಿಂದ ಕೂಡಿದೆ. ಇಂದು ನಾವು ರಾಜಕೀಯದಲ್ಲಿ ಒಂದು ಮತ ಒಂದು ಮೌಲ್ಯ ತತ್ವವನ್ನು ಗುರುತಿಸುತ್ತೇವೆ.   ಆದರೆ, ನಮ್ಮ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ವ್ಯವಸ್ಥೆಯ ಕಾರಣದಿಂದ  ಒಬ್ಬ ವ್ಯಕ್ಯಿ ಒಂದು ಮೌಲ್ಯ ಎನ್ನುವ ಅಂಶವನ್ನು ನಿರಂತರವಾಗಿ ತಿರಸ್ಕರಿಸಲಾಗುತ್ತಿದೆ. ಇನ್ನೂ ಎಲ್ಲಿಯವರೆಗೆ ನಾವು ಇಂತಹ ಬದುಕಿನ ವೈರುಧ್ಯಗಳ ನಡುವೆ ಜೀವಿಸಬೇಕು..? ಇನ್ನೂ ಎಲ್ಲಿಯತನಕ  ನಾವು ಈ ಸಾಮಾಜಿಕ ಮತ್ತು ಆರ್ಥಿಕ  ಜೀವನದಲ್ಲಿನ  ಅಸಮಾನತೆಯ ಧೋರಣೆಯನ್ನು  ಮುಂದುವರೆಸುವುದು. ಒಂದು ವೇಳೆ ನಾವು  ಹೀಗೆ ಇದೇ ರೀತಿಯ  ತಿರಸ್ಕರಿಸುವ ಮನೋಭಾವವನ್ನು ಮುಂದುವರೆಸಿದ್ದೇ ಆದಲ್ಲಿ ಅದು ಪ್ರಜಾಪ್ರಭುತ್ವವನ್ನು ಗಂಡಾಂತರದಲ್ಲಿಟ್ಟಂತೆ. ಆದ್ದರಿಂದ, ನಾವು ಸಾಧ್ಯವಾದಷ್ಟು ಮಟ್ಟಿಗೆ ಈ ವೈರುಧ್ಯಗಳನ್ನು  ತೊಡೆದು ಹಾಕಬೇಕಾಗಿದೆ. ಇಲ್ಲದೆ ಹೋದರೆ ಯಾವ ಶಕ್ತಿಗಳು ಸಮಾನತೆಯ ಅವಕಾಶದಿಂದ ತಿರಸ್ಕರಿಸಲ್ಪಟ್ಟಿರುತ್ತವೆಯೋ ಅಂಥ ಧಮನಿತ ಶಕ್ತಿಗಳು ಶ್ರಮದಿಂದ ಕಟ್ಟಿದ ಈ ಪ್ರಜಾಪ್ರಭುತ್ವ ಅಡಿಪಾಯವನ್ನೇ ಅಲುಗಾಡಿಸುತ್ತವೆ.”

ಈ ಮೇಲಿನ ಎಲ್ಲ ಬದುಕಿನ ವೈರುಧ್ಯದ ಅಂಶಗಳನ್ನು  ೬೫ ವರ್ಷಗಳ ಹಿಂದೆಯೇ ಮನಗಂಡು ಎಚ್ಚರಿಸಿದ್ದ ಅಂಬೇಡ್ಕರ್ ಅವರ ಮಾತುಗಳು ಇಂದಿಗೂ ಜಿಡ್ಡುಗಟ್ಟಿದ ನಮ್ಮ ಪ್ರಜ್ಞೆಯ ಮೇಲೆ ಚಾಟಿ ಬೀಸುವಂತಿದೆ.

ಮಂಜುನಾಥ ನರಗುಂದ
ಎಂ.ಎ.ರಾಜ್ಯಶಾಸ್ತ್ರ
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ


Tuesday 29 March 2016

ನಾ ಕಂಡಂತೆ ರೋಹಿತ್ ವೇಮುಲನ ಆತ್ಮಹತ್ಯೆಯೂ ಮತ್ತು ಅದರ ಹಿಂದಿನ ರಾಜಕಾರಣವೂ.......


ಅದು ಜನವರಿ 17. ಆ ದಿನ ಎಂದಿನಂತೆ ಸಾಮಾನ್ಯ ದಿನವಾಗಿರಲಿಲ್ಲ ಕಾರಣವಿಷ್ಟೆ, ನಾವ್ಯಾರು ಊಹಿಸದಿದ್ದ ಹೈದರಾಬಾದ್ ಕೇಂದ್ರಿಯ ವಿವಿಯ ಪ್ರತಿಭಾವಂತ ವಿದ್ಯಾರ್ಥಿ ರೋಹಿತ್ ವೇಮುಲನ ಆತ್ಮಹತ್ಯೆ,...!. ಆತನ ಸಾವಿನ ಸುದ್ದಿ ನನಗೆ ತಿಳಿದಿದ್ದು ಸಂಜೆ ೭ಕ್ಕೆ. ನನ್ನ ರೂಮೇಟ್ ರಾಜಕುಮಾರನ ಮೂಲಕ. ನಾನಿರುವ ಎಚ್ ವಿಭಾಗದ ಹಾಸ್ಟೆಲ್ ನಿಂದ ನೂರು ಮೀಟರ್ ದೂರಳತೆಯಲ್ಲಿದ್ದದ್ದು ವೇಮುಲನ New Research Hostel(NRS). ಪ್ರಾರಂಭದಲ್ಲಿ ನನಗನಿಸಿದ್ದು ಇದು ಬೇರೆ ಯಾವುದೂ ವ್ಯಕ್ತಿ ಇರಬಹುದೆಂದು. ಆದರೆ, ಅದು ರೋಹಿತ್ ವೇಮುಲ ಎಂದು ತಿಳಿಯಲು ಬಹಳ ಸಮಯವೇನು ಹಿಡಿಯಲಿಲ್ಲ. ನಾನು ಬಹಳ ಸಾರಿ ಅವನನ್ನು ಹತ್ತಿರದಿಂದ ನೋಡಿದ್ದೆ. ಅನೇಕ ಸಾರಿ ಅಂಬೇಡ್ಕರ್ ವಿಧ್ಯಾರ್ಥಿ ಸಂಘಟನೆಯ ಕಾರ್ಯಕ್ರಮದಲ್ಲಿ ನೋಡಿದ್ದ ಇಂತಹ ಮುಖಪರಿಚಯದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾಗ ರೋಹಿತ್ ನನ್ನು ಭೇಟಿಯಾದವರು ನಂಬದ ವಿಷಯ. ಹೌದು, ಖಂಡಿತ ಇದು ನನ್ನ ಮಟ್ಟಿಗೆ ನಂಬಲರ್ಹ ವಿಷಯ. ಒಂದು ಕಡೆ ವೇಮುಲ ಅಂಬೇಡ್ಕರ್, ಮಾರ್ಕ್ಸ್ ರ ವಿಚಾರಗಳಿಂದ ಪ್ರಭಾವಿತನಾಗಿ, ಅವುಗಳನ್ನ ಅಷ್ಟೇ ಚಾಚು ತಪ್ಪದೇ ಪಾಲಿಸುತ್ತಿದ್ದ ಧೈರ್ಯದ ವ್ಯಕ್ತಿ. ಆತನ ಶಿಸ್ತು ಅನೇಕ ಕಾರ್ಯಕ್ರಮ ಮತ್ತು ಹೈದರಾಬಾದ್ ವಿವಿಯಲ್ಲಿನ ಹೋರಾಟದ ಮೂಲಕ ಹತ್ತಿರದಿಂದ ಕಂಡಿದ್ದುಂಟು. ಅಷ್ಟೇ ಅಲ್ಲದೆ ನಾನು ಹೈದರಾಬಾದ್ ಕೇಂದ್ರೀಯ ವಿವಿಗೆ ಸೇರಿದ ಎರಡು ವರ್ಷಗಳ ಕಾಲಾವಧಿಯಲ್ಲಿ ನಾ ನೋಡಿದ ಮೊದಲ ಆತ್ಮಹತ್ಯೆ, ಅಲ್ಲದೇ ಇದೊಂದು ರಾಜಕೀಯ ಪ್ರೇರಿತ ಕೋಲೆ. ವೇಮುಲನ ಆತ್ಮಹತ್ಯೆಗೂ ಮೊದಲು ನಾನು ಪ್ರತಿದಿನ ಯಾವುದಾದರೂ ಕಾರ್ಯದ ನಿಮಿತ್ತ ವಿವಿಯಲ್ಲಿನ shoping complex ಗೆ ಹೋದಾಗ ನಾನು ಸಧಾ ನೋಡುತಿದ್ದದ್ದು ಅಂಬೇಡ್ಕರ್, ಜ್ಯೋತಿಭಾಪುಲೆ, ಕಾನ್ಷಿರಾಮ್ ರ ಭಾವಚಿತ್ರಗಳಿಂದ ಹೊದಿಸಿದ ವೆಲ್ಲಿವಾಡ (ಒಂದು ರೀತಿಯ ಟೆಂಟ್). ಆ ಪುಟ್ಟ ಟೆಂಟನಲ್ಲಿದ್ದ ಐದು ಸಂಶೋಧನಾ ವಿದ್ಯಾರ್ಥಿಗಳು ಸಾಮಾಜಿಕವಾಗಿ ಸವರ್ಣಿಯರಿಂದ ಹಳ್ಳಿಯಲ್ಲಿ ದಲಿತರೆನ್ನುವ ಕಾರಣಕ್ಕೆ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಟ್ಟಿದ್ದಾರೆ. ಈಗ ಅಂತಹದೇ ನೆಪದಲ್ಲಿ ಅಸ್ಪೃಶ್ಯತೆಯನ್ನು ಆಧುನಿಕತೆಯ ಮಾದರಿಯಲ್ಲಿ ಆಚರಿಸುವ ನೀಚ ಪಕ್ರಿಯೆಗೆ ವಿಶ್ವವಿಧ್ಯಾನಿಲಯಗಳು ಚಾಲನೆ ನೀಡಿವೆ. ಆ ಮೂಲಕ ಅಂತಹ ವ್ಯವಸ್ಥೆಯನ್ನ ಪ್ರಶ್ನಿಸುವವರನ್ನು ಮುಗಿಸುವಂತಹ ಹುನ್ನಾರ ಸ್ಪಷ್ಟವಾಗಿದೆ.
ಈ ಎಲ್ಲ ನಡೆಗಳು ನಮಗೆ ಪುರಾತನ ಋಗ್ವೇದದ ಪುರುಷಸೂಕ್ತನ ದೇಹರೂಡಿಯಂತೆ ಶೂದ್ರ ಮತ್ತು ಪಂಚಮನ ಕೆಲಸ ಇನ್ನುಳಿದ ವರ್ಗಗಳನ್ನು ಸಂತೈಸುವಂತದು. ಜ್ಞಾನವೆನ್ನುವುದು ಬ್ರಾಹ್ಮಣನಿಗೆ ಮಾತ್ರ ಸಿಮೀತವಾದಂತದು ಎನ್ನುವ ತತ್ವಗಳನ್ನು ನೆನಪಿಸುವಂತಿದೆ. ಇಂತಹ ಪರಂಪರಾಗತ ಕಟು ಸಾಂಪ್ರದಾಯಿಕ ಆಚರಣೆಗಳು ಆಧುನಿಕತೆಯ ನಡುವೆಯೂ ಜೀವಂತವಾಗಿರುವದಕ್ಕೆ, ವೇಮುಲನ ಸಾವಿಗೆ ಉದಾಹರಣೆ ರಾಮಾಯಣದ ಸಂಬೂಕ ಹಾಗೂ ಮಹಾಭಾರತದಲ್ಲಿನ ಏಕಲವ್ಯರಷ್ಟೇ ಸತ್ಯ. ವೇಮುಲ ಆತ್ಮಹತ್ಯೆ ಪ್ರಾರಂಭದಲ್ಲಿ ಹತ್ತರಲ್ಲಿ ಹನ್ನೊಂದನೆಯ ಘಟನೆಯಾಗಿ ಹೋಗಬಹುದೆಂದು ನಾನು ಭಾವಿಸಿದ್ದೆ, ಏಕೆಂದರೆ, ಈ ಹಿಂದೆಯೂ ಕೂಡಾ ದಲಿತ ಮತ್ತು ಗ್ರಾಮೀಣ ಭಾಗದ ಬಡವಿದ್ಯಾರ್ಥಿಗಳ ಆತ್ಮಹತ್ಯೆಗಳು ಹೇಳ ಹೆಸರಿಲ್ಲದಂತೆ ಮುಚ್ಚಿಹೋಗಿದ್ದವು. ಅದಕ್ಕೆ ಪೂರಕವಾಗಿ ಅವರ ವಯಕ್ತಿಕ ಮಾನಸಿಕ ಕಾರಣಗಳಿಂದಾಗಿ ಈ ಎಲ್ಲಾ ಸಾವುಗಳು ಸಂಭವಿಸಿದವು ಎನ್ನುವ ಮಾತುಗಳಿಗೆನೂ ಕಮ್ಮಿ ಇರಲಿಲ್ಲ. ಇಂತಹ ಕುತರ್ಕವಾದಗಳು ರೈತರ ಆತ್ಮಹತ್ಯೆಯಲ್ಲಿನ ಸ೦ದರ್ಭದಲ್ಲಿಯೂ ಇದ್ದಿರುವಂತದ್ದು ನಮ್ಮ ನೆನಪಿನಿಂದ ಮಾಸಿಲ್ಲ. ಇಲ್ಲಿ ಆತ್ಮಹತ್ಯೆಯನ್ನು ಕೇವಲ ವಯಕ್ತಿಕ ಕಾರಣದ ಮೂಲಕ ನೋಡುವುದರೋಟ್ಟಿಗೆ, ಅದರ ಹಿನ್ನಲೆಯಲ್ಲಿರುವ ನವ ಉಧಾರವಾದಿ ಜಾಗತೀಕರಣದ ಹಾಗೂ ಬ್ರಾಹ್ಮಣ ಶಾಹಿ ವ್ಯವಸ್ಥೆಯ ನೀತಿಗಳನ್ನು ಸಂರಕ್ಷಿಸುವ ಎತೇಚ್ಚ ಪ್ರಯತ್ನ ಒಂದು ಕಡೆ ನಡೆಯುತ್ತಿದೆ.
ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ರವರು ಹೇಳುವಂತೆ ರೈತರ ಆತ್ಮಹತ್ಯೆಯೂ ಸರ್ಕಾರದ ಆರ್ಥಿಕ ಮತ್ತು ರಾಜಕೀಯ ನೀತಿಗಳ ಪ್ರತಿಫಲವಾಗಿ ಜರುಗುವಂತೆ ಇಂದಿನ ರೋಹಿತ್ ವೇಮುಲಾನ ಆತ್ಮಹತ್ಯೆಯೂ ಕೂಡಾ ಅಂತಹ ನೀತಿಗಳ ಮೂಲಕ ನಾವು ನೋಡಬಹುದಾದ ಶೈಕ್ಷಣಿಕ ವ್ಯವಸ್ಥೆಯ ಒಂದು ಪ್ರಾತಿನಿಧಿಕ ಘಟನೆ. ಅಷ್ಟಕ್ಕೂ ಮೀರಿ ಒಬ್ಬ ಕಮ್ಮಾನೋ, ರೆಡ್ಡಿಯೋ ಅಥವಾ ಒಬ್ಬ ಬ್ರಾಹ್ಮಣನೋ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಹೈದರಾಬಾದ್ ವಿವಿಯಲ್ಲಿ ಕಾಣಸಿಗುವುದಿಲ್ಲ. ಈ ಎಲ್ಲ ಹಿನ್ನಲೆಯನ್ನು ಗಮನಿಸಿದಾಗ ಕೆಲವು ಅಂಶಗಳನ್ನು ನಾವು ಇತಿಹಾಸದ ಪಾಠದಿಂದ ತಿಳಿಯಬೇಕಾದುದು ಅಗತ್ಯ. ಸ್ವಾತಂತ್ರೋತ್ತರ ಭಾರತದಲ್ಲಿ ಮೀಸಲಾತಿಯ ಕಾರಣದಿಂದಾಗಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ ವರ್ಗಗಳು ಅಲ್ಪ ಮಟ್ಟಿಗೆ ಸ್ವಾವಲಂಬನೆಯನ್ನು ಮತ್ತು ಅಭಿವೃದ್ದಿಯನ್ನು ಶೈಕಣಿಕವಾಗಿ ಹಾಗೂ ಆರ್ಥಿಕವಾಗಿ ಸಾಧಿಸಲ್ಪಟ್ಟಿವೆ. ಈ ಎಲ್ಲ ಬದಲಾವಣೆಗಳನ್ನು ನಾವು ದೇಶದ ಪ್ರತಿಷ್ಟಿತ ವಿವಿಗಳ ಕ್ಯಾಂಪಸ್ ರಾಜಕಾರಣದ ಮೂಲಕ ಕಾಣಬಹುದು. ಇಂತಹ ವಿದ್ಯಾರ್ಥಿಗಳ ಕ್ಯಾಂಪಸ್ ರಾಜಕಾರಣವು, ಅದರಲ್ಲೂ ಇಂದು ಹಿಂದುಳಿದ, ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಹೋರಾಟ ಮೂಲಭೂತವಾಗಿ ಜಾಗತೀಕರಣದ ಮೂಲಕ ಬೆಳೆದು ಬಂದ ಉಧಾರವಾದಿ ನೀತಿಗಳು ಹಾಗೂ ಬ್ರಾಹ್ಮಣಶಾಯಿ ಶಕ್ತಿಗಳನ್ನು ಪ್ರಶ್ನಿಸುವ ಮತ್ತು ಅವುಗಳನ್ನು ಮಟ್ಟಹಾಕುವವರೆಗಿನ ಇಚ್ಚಾಶಕ್ತಿಯ ಪ್ರದರ್ಶನ ಬಲಪಂಥಿಯ ಶಕ್ತಿಗಳಿಗೆ ಒಂದು ಸವಾಲಾಗಿ ಪರಿಗಣಿಸಿದೆ. ಕಾರವಿಷ್ಟೇ ಇಂದಿನ ರೋಹಿತ್ ವೇಮುಲನ ಹತ್ಯೆಯ ಸಂದರ್ಭದಲ್ಲಿನ ನೀಲ್ ಸಲಾಂ ಮತ್ತು ಲಾಲ್ ಸಲಾಮ್ ನ ಒಗ್ಗಟ್ಟಿನ ಹೋರಾಟವು ವಿದ್ಯಾರ್ಥಿ ಚಳವಳಿಯಲ್ಲಿ ಒಂದು ರೀತಿಯ ಹೊಸ ಸಂಚಲನ ಹುಟ್ಟಿಸಿದೆ. ಇದಕ್ಕೆ ಪೂರಕವಾಗಿ ಹೈದರಾಬಾದ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಗಳು ವಿವಿಧ ಸಿಧ್ಧಾಂತಗಳ ಕೇಂದ್ರಬಿಂದು (Epic Center) ಗಳಾಗಿ ಕಾಣುತ್ತವೆ. ಇಲ್ಲಿ ಗಾಂಧಿ, ಅಂಬೇಡ್ಕರ್, ಮಾರ್ಕ್ಸವಾದಗಳಿಂದ ಹಿಡಿದು ಗೋಲ್ವಾಲ್ಕರ್, ಸಾವರ್ಕರರ ಹಿಂದುತ್ವವಾದಗಳವರೆಗೂ ಚರ್ಚೆಗೊಳಪಡುತ್ತವೆ. ಇಂತಹ Politicaly alert ಹಾಗೂ vibrant ಆಗಿರುವಂತಹ ಹಾಗೂ ಪ್ರಗತಿಪರ ಮತ್ತು ಸಾಮಾಜಿಕ ರಾಜಕೀಯ ವಿಷಯಗಳಿಗೆ ತಕ್ಷಣ ಸ್ಪಂಧಿಸುವ ವಿವಿಗಳಲ್ಲಿ ಮುಂಚೂನೆಯಲ್ಲಿರುವಂತವು. ಇಂತಹ ಸಂಸ್ಥೆಗಳಿಗೆ ಸಂಘ ಪರಿವಾರಕ್ಕೆ ಸಿಂಪಥಿ ಇರುವ ವ್ಯಕ್ತಿಗಳನ್ನು ಕುಲಪತಿಗಳನ್ನಾಗಿ ನೇಮಿಸುವ ಮೂಲಕ ಒಂದು ರೀತಿಯಲ್ಲಿ ವಿವಿಗಳನ್ನು ಕೇಸರಿಕರಣಕ್ಕೆ ಒಳಪಡಿಸುವ ಪ್ರಯತ್ನಕ್ಕೆ ಚಾಲನೆ ನೀಡಿದಂತಿದೆ. ಇನ್ನೊಂಡದೆ ಇತ್ತೀಚಿಗೆ ಬಿಜೆಪಿ ಮತ್ತು ಆರ್ ಎಸ್ ಎಸ್ ಹಿಂದುತ್ವದ ಬದಲಾಗಿ ರಾಷ್ಟ್ರಿಯತವಾದದ (Nationalism) ಪದನಾಮ ಬಳಕೆಯು ಒಂದು ರೀತಿಯಲ್ಲಿ ಹಿಂದುತ್ವ ರಾಜಕಾರಣವನ್ನು ಇಮ್ಮಡಿಗೊಳಿಸುವುದಕ್ಕೆ ಸಿದ್ದವಾದಂತೆ ಕಾಣುತ್ತದೆ. ಆ ಮೂಲಕ ಬಿಜೆಪಿ ಇಂದು ತನ್ನ ಸರ್ಕಾರದ ನಡೆಗಳಿಗೆ ಎಲ್ಲ ಜವಾಬುಗಳನ್ನು ಕೊಡುವುದರ ಮೂಲಕ ಮತ್ತು ಅಂತಹ ವಿಚಾರಗಳನ್ನು ಪ್ರಶ್ನಿಸುವವರನ್ನು ದೇಶದ್ರೋಹಿ (Anti-national) ಪಟ್ಟವನ್ನು ಕಟ್ಟುತ್ತಿದೆ..
ಅದ್ದರಿಂದ ಇಂದು ೭೫ ರ ತುರ್ತುಪರಿಸ್ಥಿತಿಯ ನಂತರ ನಡೆಯುತ್ತಿರುವ ಬಹುದೊಡ್ಡ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಚಳವಳಿಯನ್ನು ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ವಿಧ್ಯಾರ್ಥಿಗಳಿಗೆ ನೀರು, ಆಹಾರ, ಇಂಟರ್ನೆಟ್ ಇನ್ನಿತರ ಸೌಲಭ್ಯಗಳನ್ನು ಕಡಿತಗೊಳಿಸುವುದರ ಜೊತೆಗೆ ಮಾದ್ಯಮದವರಿಗೂ ಕೂಡ ಪ್ರವೇಶವನ್ನು ನಿರ್ಭಂಧಿಸಲಾಗಿದೆ. ಅಷ್ಟೇ ಅಲ್ಲ, ಹೇರಳವಾದ ಪೋಲಿಸ್ ಮತ್ತು ಪ್ಯಾರಾಮಿಲಿಟರಿ ಪಡೆಯನ್ನು ನಿಯೋಜಿಸಿ ಹೈದರಾಬಾದ್ ಕೇಂದ್ರಿಯ ವಿಶ್ವವಿಧ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಅಘೋಷಿತ ಎಮರ್ಜೆನ್ಸಿಯ ವಾತಾವರಣ ನಿರ್ಮಿ‍ಸಲಾಗಿದೆ. ಇದರಿಂದ ವಿಧ್ಯಾರ್ಥಿಗಳು ನಿರಾಶ್ರಿತರಂತೆ ಜೀವನ ನಡೆಸುವಂತಾಗಿದೆ. ಅಲ್ಲದೆ ಹೋರಾಟದಲ್ಲಿ ತೊಡಗಿರುವ ವಿದ್ಯಾರ್ಥಿಗಳನ್ನು ಮತ್ತು ಪ್ರಾಧ್ಯಾಪಕರನ್ನು ಬಂಧಿಸಿದ್ದಲ್ಲದೇ, ಅವರನ್ನು ಹಿಗ್ಗಾಮುಗ್ಗವಾಗಿ ತಳಿಸಲಾಗಿದೆ. ಇಂತಹ ಖಾಕಿ ಬೂಟುಗಳ ಸಪ್ಪಳದಲ್ಲಿ ನನ್ನ ಕಣ್ಣಿಗೆ ಕಂಡದ್ದು ಕ್ಯಾಂಪಸ್ಸಿನ ಮೂಲೆಯಲ್ಲಿದ್ದ ಈ ಗೋಡೆ ಬರಹ…....
You can pluck the
Flowers, But can`t
Stop the spring to Come

ಮಂಜುನಾಥ ನರಗುಂದ
MA ರಾಜ್ಯಶಾಸ್ತ್ರ ದ್ವೀತಿಯ ವರ್ಷ 
ಹೈದರಾಬಾದ್ ಕೇಂದ್ರೀಯ ವಿಶ್ವವಿಧ್ಯಾನಿಲಯ

Thursday 10 March 2016

ಸುಮ್ಮನೆ ಗೀಚಿದ ಸಾಲುಗಳು
1)

ಸಂಜೆಗತ್ತಲು ಕಳೆದಿದೆ
ಮಸುಕು ಮಂಜು ಹಾಗೆ ಇದೆ 
ಸುಮ್ಮನೆ ಕದಡುತಿದ್ದ
ನವಿರುಗನಸುಗಳನ್ನು
ಬಿತ್ತರಿಸುತ್ತಲಿದ್ದಾಗ
ನಿನ್ನ ಮುಖ ಇನ್ನು ಹಾಗೆ ಇದೆ
ಮೊನ್ನೆ ಕಂಡ ಮುಂಗಾರಿನ ಇಬ್ಬನಿಯಂತೆ.
2)
ಕಾಲಗಳು ಉರುಳುತ್ತಲೇ ಇವೆ
ಕನಸುಗಳು ಹೊಸೆಯುತ್ತಲೇ ಇವೆ
ಎಲ್ಲೋ ನೋಡಿದ ನೆನಪುಗಳು ಹಾಗೆ ಇವೆ
3)
ಕನಸುಗಳಿಗೆ ಕನ್ನಡಿ ಇಟ್ಟು
ಮುಖ ನೋಡಿದೆ
ಎಲ್ಲೋ ಇದ್ದ ಮನಸ್ಸು
ಕತ್ತಲಿಗೆ ಮರುಗಿತ್ತು.
4)
ನಿನ್ನ ನೋಡುತ ಕನಸುಗಳಿಗೆ
ಮುಂಗಾರು ನೆನಪಿಸಿದೆ
ಆ ಸಂಜೆಯ ಇಳಿಗನಸು
ಒಮ್ಮೆಗೆ ನನ್ನತ್ತ ತಿರುಗಿತು
11-02-2016 ಮಂಜುನಾಥ ನರಗುಂದ

ನಕ್ಷತ್ರದ ಹಂಬಲಿಕೆಗಳು
ಕತ್ತಲುಗಳು ಕುಣಿಯುತ್ತಿವೆ
ನೆತ್ತರವು ಹರಿಯುತ್ತಿದೆ
ಕಾಣದಗಲಕ್ಕೂ ಕೈಚಾಚುತ್ತಿದೆ
ನಕ್ಷತ್ರದ ಹಂಬಲಿಕೆಗಳು
ನೇಣುಗಂಬಗಳಾಗುತ್ತಿವೆ
ಬಣ್ಣದ ಕನಸಿಗೆ, ಆದರ್ಶಕ್ಕೆ
ಧರ್ಮದ ವಿಷಜಂತು ಮುಕ್ಕಿದೆ
ಏಕಲವ್ಯ, ಶಂಬೂಕ,ರೋಹಿತರ
ಪ್ರಜ್ಞೆಗಳು
ವೇದೊತ್ತರದ
ಪ್ರಶ್ನೆಗಳು
ಸುಡುಬಿಸಿಲಿಗೆ ಬೇಯ್ದ ಉರಿಚರ್ಮದ
ಉತ್ತರಗಳು
ಧರ್ಮಕ್ಕೆ,ವೇದಕ್ಕೆ,ಶಾಸ್ತ್ರಗಳ ಬಹಿಷ್ಕಾರಕ್ಕೆ
ಉದರಾಗ್ನಿಯ ಕಿಚ್ಚು ಹತ್ತಿದೆ
ಸಂಕಟಗಳು ಜ್ವಾಲೆಯ ಹೊಯ್ದಾಟದಲಿ
ಉರಿಯುತ್ತಿವೆ
ಕಾಯ್ದ ತಮಟೆಗಳ ಆರ್ಭಟಕ್ಕೆ
ಗುಡಿ ಘಂಟೆಯ ಸಪ್ಪಳ ಮಂಕಾಗಿವೆ
ಹೊಸನಾದ ಹೊಸನುಡಿ
ಹೊಸ ಕನಸ ಕಟ್ಟುವ ಆಶಯಗಳು
ನಕ್ಷತ್ರಗಳಾಗುತ್ತಿವೆ
ಜೋತಿಷ್ಯ ಭವಿಷ್ಯದ ನುಡಿಗಳಾಚೆಗೆ...
ಬನದ ಹಕ್ಕಿ 

ಬನದ ಹಕ್ಕಿ ಮುಗಿಲೆತ್ತರಕ್ಕೆ ಹಾರುತ್ತಲೇ ಇತ್ತು,
ಗಡಿಯ ಬಂಧಗಳಾಚೆಗಿನ ಬಣ್ಣಗಳ ಕಾಣುತ್ತಲೇ
ವಸಂತಗಳಾಚೆಯ ದಿನಗಳ
ಎಲ್ಲೆಯನ್ನು ಮಿರುತಿತ್ತು.
ಇಂದು ಬಂಧಗಳ ನಡುವಿದ್ದ
ನನ್ನ ಸಾಮಾನ್ಯತೆಗೆ
ವಿಚಿತ್ರ ಬಣ್ಣಗಳು ಮುತ್ತಿವೆ
ಕರ್ಮದ ಧರ್ಮಕ್ಕೆ
ಅಸಮಾನತೆಯ ಬೆಂಕಿ ಬಿದ್ದಿದೆ
ನನ್ನೊಳಗಿನ ಬನದ ಹಕ್ಕಿ
ಎಲ್ಲೆಗಳನ್ನು ಬಣ್ಣಗಳಲ್ಲಿ ಕಟ್ಟಿದೆ
ಧಾರಾಳತೆಯ ಪರಮಾವಧಿಯ
ಧಾಟಿಯಲಿ ಬಂದ ಹಕ್ಕಿ
ಗೂಡು ಸೇರುವಲ್ಲಿ ದಿಕ್ಕು ತಪ್ಪಿದೆ
ಈ ವಿಚಿತ್ರ ಬಣ್ಣಗಳ ನಡುವಿದ್ದ ಗೂಡನ್ನು
ಕದ್ದವರಾರು?
ಬಣ್ಣಗಳೋ ? ಅಥವಾ ಬಣ್ಣದಲ್ಲಿ ಮಾಯವಾದ ಧಾರಾಳತೆಯೋ?
ಆ ಬನದ ಹಕ್ಕಿ
ಇನ್ನೂ ಅರಸುತ್ತಲೇ ಇದೆ
ಕಳೆದುಕೊಂಡ ಧಾರಾಳತೆಯ ಗೂಡನ್ನು
ಮರಳಿ ಪಡೆದೆನೆಂಬ ಅಚಲ ನಂಬಿಕೆಯೊಂದಿಗೆ.

March 8th 2016