ಕಪ್ಪು ಸುಂದರಿ.......
ಕತ್ತಲಿಗೂ ಬೆಳಕು
ಬೆಳಕಿಗೂ ಕತ್ತಲು
ಈ ಬಂಧ ಬ್ರಮಿಸಿ
ಬದುಕ ಹೊರಡಿಸಿ
ಕೆತ್ತಿದ ಜಕಣ
ಮರುಳಾದ ಮನ ಗ್ರಹಿಸಿ
ಕಪ್ಪು ಸುಂದರಿಯ ಮೋಹಿಸಿ
ಅಲಂಕಾರ ತೊಡಿಸಿ
ರಂಬೆಯೋ ತಿಲೋತ್ತಮೆಯೋ
ಮಯೂರ ನಾಟ್ಯದ
ಅಣುಕು ರಾಣಿ
ಈ ಮಯೂರಿ
ಶಾಂತ ಶೃಂಗಾರ
ವೀರಾದಿ ಅದ್ಬುತಗಳ
ನವರಸದ ಗಣಿ
ಈ ಸಪ್ನ ಮಂಜರಿ
ಜಕಣನ
ಕಪ್ಪು ಸುಂದರಿ,,,,,
21-10-2015 ಮಂಜುನಾಥ ನರಗುಂದ
ಬುಧವಾರ